
Table of Contents
ಸಂಸ್ಥೆಯ ಬಗ್ಗೆ
ವೇಡು- (www.weduglobal.org) ಪ್ರಪಂಚದಾದ್ಯಂತದ ಎಲ್ಲಾ ನಾಯಕರಲ್ಲಿ ಅರ್ಧದಷ್ಟು ಮಹಿಳೆಯರು ಇರಬೇಕು ಎಂಬ ಸರಳ ನಂಬಿಕೆಯೊಂದಿಗೆ ಪ್ರಾರಂಭಿಸಿದ ಸಂಸ್ಥೆ. ಈ ಸಂಸ್ಥೆಯ ಸಹ-ಸಂಸ್ಥಾಪಕರಾದ ಮಾರಿಯೋ ಮತ್ತು ಮಾರಿ ಎರಡು ಪ್ರಶ್ನೆಗಳನ್ನು ವಿಶ್ವದ ಬಹುತೇಕ ಭಾಗಗಳಲ್ಲಿ ಎತ್ತಿದ್ದು ಅವು ಇಂತಿವೆ: “ನಾವು ಮಹಿಳಾ ನಾಯಕರನ್ನು ಎಲ್ಲಿ ಕಾಣಬಹುದು, ಮತ್ತು ಅವರಿಗೆ ಏನು ಬೇಕು?”
2011 ರಲ್ಲಿ, ಈ ಜೋಡಿಯು ಆಗ್ನೇಯ ಏಷ್ಯಾಕ್ಕೆ ಪ್ರಯಾಣಿಸಿ, ಅಲ್ಲಿ ಹಲವಾರು ಪಾಲುದಾರರು ಮತ್ತು ಸಮಾನ ಮನಸ್ಕ ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸುವದರ ಮೂಲಕ ಮೊದಲ ಸಾಂಕೇತಿಕ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಲಿಂಗ-ಸಮಾನ ನಾಯಕತ್ವದ ಭವಿಷ್ಯವನ್ನು ನಿರ್ಮಿಸಲು ಹೂಡಿಕೆ ಮಾಡಿದರು. ಮಹಿಳೆಯರಿಗಾಗಿ ಹಲವಾರು ಕಾರ್ಯಾಗಾರಗಳನ್ನು ಆಯೋಜಿಸಿದರು.
ನಾಯಕತ್ವ ಪರಿಚಯ (ಐಟಿಎಲ್) ತರಬೇತಿ ಬಗ್ಗೆ
ನಾಯಕತ್ವದ ಪರಿಚಯ (ಐಟಿಎಲ್) ಎಂಬುದು ನಾಯಕತ್ವದ ಅಭಿವೃದ್ಧಿ ಉದ್ದೇಶಗಳಲ್ಲಿ ಮಹಿಳೆಯರು ಗಮನವನ್ನು ಕೇಂದ್ರಿಕರಿಸಲು ಮತ್ತು ಅವರ ವೈಯಕ್ತಿಕ, ವೃತ್ತಿಪರ ಗುರಿಗಳ ಪ್ರತಿಬಿಂಬಿವನ್ನು ಪ್ರಾರಂಭಿಸಲು ವಿನ್ಯಾಸಗೊಳಿಸಲಾದ 2-ಭಾಗಗಳ ಆನ್ಲೈನ್ ತರಬೇತಿಯಾಗಿದೆ.
ನಾಯಕತ್ವದ ಪರಿಚಯ (ಐಟಿಎಲ್) ಮಹಿಳೆಯರಿಗೆ ವೆಡು ಲೀಡರ್ಶಿಪ್ ಕಮ್ಯುನಿಟಿಯ ಭಾಗವಾಗಲು ಒಂದು ಪ್ರವೇಶದ್ವಾರವಾಗಿದೆ, ಇದು ರೈಸಿಂಗ್ ಸ್ಟಾರ್ಸ್ ಕಾರ್ಯಕ್ರಮದ ಮೂಲಕ ಜೀವನಪರ್ಯಂತ ಮಾರ್ಗದರ್ಶನ ಮತ್ತು ಎಫ್ಐಎಸ್ಎ ಕಾರ್ಯಕ್ರಮದ ಮೂಲಕ ಮಹಿಳೆಯರಿಗೆ ಶಿಕ್ಷಣ ಧನಸಹಾಯದಂತಹ ಇತರ ಅವಕಾಶಗಳನ್ನು ತೆರೆಯುತ್ತದೆ.
ನಾಯಕತ್ವ ಪರಿಚಯ (ಐಟಿಎಲ್) ತರಬೇತಿ ವಿವರಗಳು
ಸಂಸ್ಥೆಯ ಹೆಸರು : ವೆಡು (www.weduglobal.org)
ಅರ್ಜಿ ಸಲ್ಲಿಸುವ ಗಡುವು: ಯಾವುದೇ ಗಡುವು ಇಲ್ಲ
ಭಾಷೆ: ಇಂಗ್ಲಿಷ್
ಸ್ವರೂಪ: ಆನ್ ಲೈನ್
ಗಂಟೆಗಳು: ವಾರಕ್ಕೆ ಸುಮಾರು 2 ಗಂಟೆಗಳು
ಅವಧಿ: ಒಂದು ತಿಂಗಳು (ಪ್ರತಿ ಭಾಗಕ್ಕೆ)
ಕಾರ್ಯಕ್ರಮದ ಶುಲ್ಕ: ಉಚಿತ
ಐಟಿಎಲ್ ತರಬೇತಿಯು ಎರಡು ಭಾಗಗಳನ್ನು ಒಳಗೊಂಡಿರುವ ಚಟುವಟಿಕೆಗಳ ಅತ್ಯಾಕರ್ಷಕ ಮತ್ತು ಸವಾಲಿನ ವೇಳಾಪಟ್ಟಿಯನ್ನು ಒಳಗೊಂಡಿದೆ:
ಐಟಿಎಲ್ – ಭಾಗ 1
ಐಟಿಎಲ್ – ಭಾಗ 2 – ಐಟಿಎಲ್ ಭಾಗ 1 ಪೂರ್ಣಗೊಳಿಸಿದ ನಂತರ ಹೆಚ್ಚಿನದನ್ನು ಕಲಿಯಲು ಮತ್ತು ಅನ್ವೇಷಿಸಲು ಉತ್ಸುಕರಾಗಿರುವ ಮಹಿಳೆಯರಿಗಾಗಿ.
ನೋಂದಣಿಗಾಗಿ ಇಲ್ಲಿ ಕ್ಲಿಕ್ಕಿಸಿ : https://www.weduglobal.org/programmes/leadershiptraining/itl-registration-form/