ಜುಲೈ 27 ರಂದು, ಭಾರತದ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ ಚಲನಚಿತ್ರ ತಿದ್ದುಪಡಿ ಮಸೂದೆ 2023 ಅನ್ನು ಅಂಗೀಕರಿಸಲು ಮತ ಚಲಾಯಿಸಿತು. ಈ ಮಸೂದೆಯು ಚಲನಚಿತ್ರ ಪೈರಸಿ ವಿರುದ್ಧ ಕ್ರಮ ತೆಗೆದುಕೊಳ್ಳವ ಅಂಶಗಳನ್ನು ಒಳಗೊಂಡಿದ್ದು ಅದಲ್ಲದೇ ಪರವಾನಗಿ ಪ್ರಕ್ರಿಯೆಗಳನ್ನು ಸುಗಮಗೊಳಿಸುವ ಅಂಶಗಳನ್ನು ಹೊಂದಿದೆ.

ಚಲನಚಿತ್ರ ತಿದ್ದುಪಡಿ ಮಸೂದೆ 2023 ತಿದ್ದುಪಡಿಯ ಮುಖ್ಯಾಂಶಗಳು ಈ ಕೆಳಗಿನಂತಿವೆ
- ಪ್ರಸ್ತಾವಿತ ಕಾಯ್ದೆಯ ಅಡಿಯಲ್ಲಿ ಚಲನಚಿತ್ರಗಳ ಅಕ್ರಮ ಪ್ರತಿಗಳನ್ನು ತಯಾರಿಸುವವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಚಲನಚಿತ್ರವನ್ನು ನಿರ್ಮಿಸುವ ಒಟ್ಟು ವೆಚ್ಚದ ಶೇಕಡಾ 5 ವರೆಗೆ ದಂಡವನ್ನು ವಿಧಿಸುವ ಕುರಿತು ಈ ಉದ್ದೇಶಿತ ಕಾನೂನಿನಲ್ಲಿ ಪ್ರಸ್ತಾಪಿಸಲಾಗಿದೆ.
- ಇದು ಯುಎ ವರ್ಗದ ಅಡಿಯಲ್ಲಿ ಮೂರು ಹೊಸ ಪ್ರಮಾಣೀಕರಣಗಳನ್ನು ಪ್ರಸ್ತುತಪಡಿಸುತ್ತದೆ, ಯುಎ 7 ಪ್ಲಸ್, ಯುಎ 13 ಪ್ಲಸ್ ಮತ್ತು ಯುಎ 16 ಪ್ಲಸ್, ಇವುಗಳ ಪ್ರಕಾರ ಮೇಲಿನ ವಯಸ್ಸಿನ ಮಿತಿಗಿಂತ ಕಡಿಮೆ ವಯಸ್ಸಿನ ಅಪ್ರಾಪ್ತ ವಯಸ್ಕರು ಈ ಚಲನಚಿತ್ರಗಳನ್ನು ಪೋಷಕರ ಮೇಲ್ವಿಚಾರಣೆಯಲ್ಲಿ ವೀಕ್ಷಿಸಬಹುದು.
- ಚಲನಚಿತ್ರ ಮಂದಿರದಲ್ಲಿ ತೋರಿಸಲಾಗುವ ಚಲನಚಿತ್ರ ಅಥವಾ ಚಲನಚಿತ್ರದ ಯಾವುದೇ ಭಾಗವನ್ನು ರೆಕಾರ್ಡಿಂಗ್ ಮಾಡುವುದನ್ನು ಈ ಕ್ರಮದ ಅಡಿಯಲ್ಲಿ ನಿಷೇಧಿಸಲಾಗಿದೆ.
- ಕಾನೂನಿನ ನಿಯಮಗಳ ಅಡಿಯಲ್ಲಿ, ಆಡಿಯೊವಿಶುವಲ್ ಉಪಕರಣಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
- ಪೈರಸಿಯಿಂದಾಗಿ ಚಲನಚಿತ್ರ ಉದ್ಯಮವು ಅನುಭವಿಸಿದ 20,000 ಕೋಟಿ ರೂ.ಗಳ ನಷ್ಟವನ್ನು ನಿಲ್ಲಿಸುವ ಗುರಿಯನ್ನು ಈ ಕಾನೂನು ಹೊಂದಿದೆ, ಆದರೆ ಹಾಗೆ ಮಾಡುವಲ್ಲಿ ಅದು ಯಶಸ್ವಿಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಬೇಕಾಗಿದೆ.
- ಈ ಹೊಸ ತಿದ್ದುಪಡಿ ಕಾಯ್ದೆ ಜಾರಿಯಾದರೆ, ಸಿನೆಮಾ ಹಾಲ್ ಗಳ ಒಳಗೆ ಚಲನಚಿತ್ರ ತುಣುಕುಗಳನ್ನು ರೆಕಾರ್ಡ್ ಮಾಡುವುದು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಆಡಿಯೊ-ದೃಶ್ಯ ಸ್ಪಾಯ್ಲರ್ ಗಳನ್ನು ಹಂಚಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸುತ್ತದೆ.