KSET ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ 2023 ರ ಸಂಪೂರ್ಣ ಮಾಹಿತಿ (Complete Information About KSET-2023)

topkarnataka.online

ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (KSET) ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆಯಾಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಕೈಗೊಳ್ಳಲಾಗುತ್ತದೆ. ಕರ್ನಾಟಕದ ಸ್ನಾತಕ ಪದವಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರು ಅಥವಾ ಉಪನ್ಯಾಸಕರಾಗಲು ಇದು ಪ್ರಮುಖ ಅರ್ಹತಾ ಪರೀಕ್ಷೆಯಾಗಿದೆ. ಈ ಹಿಂದೆ ಮೈಸೂರು ವಿಶ್ವವಿದ್ಯಾಲಯ KSET ಪರಿಕ್ಷೆಯನ್ನು ನಡೆಸುತ್ತಿತ್ತು ಈ ವರ್ಷದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೈಗೊಳ್ಳುತ್ತಿದೆ.

KSET ಉದ್ದೇಶ

ಕರ್ನಾಟಕದಾದ್ಯಂತ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅಭ್ಯರ್ಥಿಗಳ ಅರ್ಹತೆಯನ್ನು ನಿರ್ಧರಿಸುವುದು ಕೆಎಸ್ಇಟಿ ಪರೀಕ್ಷೆಯ ಪ್ರಾಥಮಿಕ ಉದ್ದೇಶವಾಗಿದೆ. ಇದನ್ನು ಮಾನವಿಕ, ಸಮಾಜ ವಿಜ್ಞಾನ, ನೈಸರ್ಗಿಕ ವಿಜ್ಞಾನ, ವಾಣಿಜ್ಯ ಸೇರಿದಂತೆ ವಿವಿಧ ವಿಷಯಗಳಲ್ಲಿ ನಡೆಸಲಾಗುತ್ತದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಪರಿಗಣಿಸಲು ಅರ್ಹತಾ ಮಾನದಂಡವಾಗಿ ಕಾರ್ಯನಿರ್ವಹಿಸುವುದರಿಂದ ಕೆಎಸ್ಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ನಿರ್ಣಾಯಕವಾಗಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗಕ್ಕೆ (ಯುಜಿಸಿ) ಸಂಯೋಜಿತವಾಗಿರುವ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಇದು ಕಡ್ಡಾಯ ಅವಶ್ಯಕತೆಯಾಗಿದೆ.

KSET ಮಹತ್ವ

  • ಕೆಎಸ್ಇಟಿ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವ ಮೂಲಕ, ಅಭ್ಯರ್ಥಿಗಳು ತಮ್ಮ ವಿಷಯ ಜ್ಞಾನ ಮತ್ತು ಪರಿಣತಿಯನ್ನು ಅವರು ಆಯ್ಕೆ ಮಾಡಿದ ಕ್ಷೇತ್ರದಲ್ಲಿ ಪ್ರದರ್ಶಿಸುತ್ತಾರೆ.
  • ಬೋಧನಾ ಸ್ಥಾನಗಳಿಗೆ ಅರ್ಹ ಮತ್ತು ಸಮರ್ಥ ವ್ಯಕ್ತಿಗಳ ಆಯ್ಕೆಯನ್ನು ಖಚಿತಪಡಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.
  • ಕರ್ನಾಟಕದಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅಭ್ಯರ್ಥಿಗಳ ಅರ್ಹತೆಯನ್ನು ನಿರ್ಧರಿಸುವಲ್ಲಿ ಕೆಎಸ್ಇಟಿ ಪರೀಕ್ಷೆ ಮಹತ್ವದ ಪಾತ್ರ ವಹಿಸುತ್ತದೆ.

ಕರ್ನಾಟಕ ರಾಜ್ಯಅರ್ಹತಾ ಪರೀಕ್ಷೆ (KSET) 2023 ಮಹತ್ವದ ದಿನಾಂಕಗಳು

ಆನ್ಲೈನ ಅರ್ಜಿ ಪ್ರಾರಂಭದ ದಿನಾಂಕ: 11-09-2023 to 30-09-2023

ಅರ್ಜಿ ಶುಲ್ಕ ಪಾವತಿಸಲು ಕಡೆಯ ದಿನಾಂಕ: 03-10-2023

ಪರಿಕ್ಷಾ ದಿನಾಂಕ: 26-11-2023

KSET ಅರ್ಜಿಯನ್ನು ಸಲ್ಲಿಸುವ ವಿಧಾನ

ಕೆಸೆಟ್ 2023ಕ್ಕೆ ಪರೀಕ್ಷೆ ಬರೆಯಲು ಬಯಸುವ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ https://karnemakaone.kar.nic.in/pqrs/ ನಲ್ಲಿ ಆನ್‌ಲೈನ್‌ ಅರ್ಜಿ ಸಲ್ಲಿಸಬೇಕು

ಅರ್ಜಿ ಸಲ್ಲಿಕೆ >>>> ಫೋಟೋ ಮತ್ತು ಸಹಿ ಅಪ್ಲೋಡ್ >>>>> ಶುಲ್ಕ ಪಾವತಿ>>>>>> ಅರ್ಜಿ ಮುದ್ರಿಸುವುದು

(ಎಲ್ಲಾ ಸ್ಕ್ಯಾನ್ ಮಾಡಿದ ಪ್ರತಿಗಳು JPEG ಸ್ವರೂಪದಲ್ಲಿರಬೇಕು. ಆನ್‌ಲೈನ್ ಅಪ್ಲಿಕೇಷನ್ ವ್ಯವಸ್ಥೆಯು ನಿರ್ಧಿಷ್ಟಪಡಿಸಿದ ಗಾತ್ರಗಳಿಗಿಂತ ಚಿಕ್ಕದಾದ / ದೊಡ್ಡದಾದ ಫೈಲ್‌ಗಳನ್ನು ಅಪ್‌ಲೋಡ್ ಮಾಡಲು ಅನುಮತಿಸುವುದಿಲ್ಲ.

  • ಅಭ್ಯರ್ಥಿಗಳು ಕೆಸೆಟ್ ಪರೀಕ್ಷೆ ಬರೆಯುವ ವಿಷಯದಲ್ಲಿ ಯುಜಿಸಿ ನವದೆಹಲಿಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಸ್ನಾತಕೋತ್ತರ ಅಥವಾ ಯಾವುದೇ ತತ್ಸಮಾನ ಪದವಿಯನ್ನು ಹೊಂದಿರಬೇಕು.
  • ಸ್ನಾತಕೋತ್ತರ ಪದವಿಯಲ್ಲಿ ಅಧ್ಯಯನ ಮಾಡಿದ ವಿಷಯದಲ್ಲಿಯೇ ಅಭ್ಯರ್ಥಿಗಳು ಕೆಸೆಟ್ (KSET ಪರೀಕ್ಷೆಯನ್ನು ತೆಗೆದುಕೊಳ್ಳಬೇಕು. ಪ್ರಸ್ತುತ ಕೆಸೆಟ್‌ ಪ್ರಕಟಣೆಯಲ್ಲಿ ಇಲ್ಲದಿರುವ ವಿಷಯಗಳಿಗೆ ಅಭ್ಯರ್ಥಿಗಳು ವರ್ಷದಲ್ಲಿ ಎರಡು ಬಾರಿ ನಡೆಯುವ ಯು.ಜಿ.ಸಿ, ಎನ್.ಇ.ಟಿ ಅಥವಾ ಯು.ಜಿ.ಸಿ-ಸಿ.ಎಸ್.ಐ.ಆರ್-ಎನ್.ಇ.ಟಿ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.

ಪರೀಕ್ಷಾ ಶುಲ್ಕ, ಪಾವತಿಸುವ ವಿಧಾನ ಮತ್ತು ವಯೋಮಿತಿ

  1. ಪರೀಕ್ಷಾ ಶುಲ್ಕ ವರ್ಗ ಸಾಮಾನ್ಯ ವರ್ಗ, ಪ್ರವರ್ಗ II-A, II-B, III-A, III-B, ಹಾಗೂ ಇತರೆ ರಾಜ್ಯದ ಅಭ್ಯರ್ಥಿಗಳಿಗೆ 1,000/- .
  2. ಪ್ರವರ್ಗ- I, SC, ST, PWD ಮತ್ತು ತೃತೀಯ ಲಿಂಗ ಅಭ್ಯರ್ಥಿಗಳಿಗೆ 700/-
  3. ಪಾವತಿಸುವ ವಿಧಾನ : ಶುಲ್ಕವನ್ನು ಕರ್ನಾಟಕದಲ್ಲಿನ ಗಣಕೀಕೃತ ಅಂಚೆ ಕಛೇರಿಗಳಲ್ಲಿ ಮಾತ್ರ ಪಾವತಿಸಬೇಕು. ಶುಲ್ಕ ವಿನಾಯಿತಿಯನ್ನು ಪ್ರವರ್ಗ- I, SC, ST, ತೃತೀಯ ಲಿಂಗ ಅಭ್ಯರ್ಥಿಗಳಿಗೆ ಮತ್ತು Medical Certificate with 40% or more disability ಹೊಂದಿರುವ PWD ಅಭ್ಯರ್ಥಿಗಳಿಗೆ ನೀಡಲಾಗುತ್ತದೆ.
  • ಬೇರೆ ಯಾವುದೇ ವಿಧಾನದ ಮೂಲಕ ಶುಲ್ಕ ಪಾವತಿಸಲು ಅವಕಾಶವಿರುವುದಿಲ್ಲ. (ಉದಾ: Money Order, Demand Draft, IPO), ಒಮ್ಮೆ ಶುಲ್ಕ ಪಾವತಿಸಿದ ನಂತರ ಯಾವುದೇ ಕಾರಣಕ್ಕೂ ಹಣವನ್ನು ಹಿಂದಿರುಗಿಸಲಾಗುವುದಿಲ್ಲ.
  • ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ತೆಗೆದುಕೊಳ್ಳಲು ಗರಿಷ್ಟ ವಯೋಮಿತಿ ಇರುವುದಿಲ್ಲ.

ಬಹುಮುಖ್ಯ ಸೂಚನೆಗಳು

  • ಒಂದಕ್ಕಿಂತ ಹೆಚ್ಚು ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳು, ಯಾವುದಾದರೂ ಒಂದು ವಿಷಯದಲ್ಲಿ ಮಾತ್ರ ಕೆಸೆಟ್ (KSET) ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಅಭ್ಯರ್ಥಿಗಳು ಪರೀಕ್ಷಾ ವಿಷಯವನ್ನು ಆಯ್ಕೆ ಮಾಡಿ ಅರ್ಜಿ ಸಲ್ಲಿಸಿದ ನಂತರ ಯಾವುದೇ ಕಾರಣಕ್ಕೂ ವಿಷಯಗಳ ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ.
  •  ಕರ್ನಾಟಕ ರಾಜ್ಯವನ್ನು ಹೊರತುಪಡಿಸಿ, ಹೊರರಾಜ್ಯದ ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗ ಮತ್ತು ಇತರ ಹಿಂದುಳಿದ ವರ್ಗಕ್ಕೆ ಸೇರಿದ (CAT-1,IIA, IIB, IIIA, ಮತ್ತು IIIB) ಅಭ್ಯರ್ಥಿಗಳು ಕೆಸೆಟ್ ಪರೀಕ್ಷೆಯನ್ನು ಸಾಮಾನ್ಯ ವರ್ಗದಡಿಯಲ್ಲಿ (GM) ಮಾತ್ರ ತೆಗೆದುಕೊಳ್ಳಬೇಕು.
  • ಈಗಾಗಲೇ ಕೆಸೆಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಮುಂಬರುವ ಕೆಸೆಟ್ ಪರೀಕ್ಷೆಗೆ ಅದೇ ವಿಷಯದಲ್ಲಿ (Same Subject) ಅರ್ಜಿ ಸಲ್ಲಿಸುವಂತಿಲ್ಲ. ಕೆಸೆಟ್ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಪುನಃ ಅರ್ಜಿ ಸಲ್ಲಿಸಿದ್ದು ಕಂಡು ಬಂದ ಪಕ್ಷದಲ್ಲಿ ಅಂತಹ ಅಭ್ಯರ್ಥಿಗಳ ಅರ್ಹತೆಯನ್ನು ರದ್ದುಗೊಳಿಸಲಾಗುವುದು ಹಾಗೂ ಅವರು ಹಿಂದೆ ಪಡೆದಿರುವ ಕೆಸೆಟ್ ಪರೀಕ್ಷೆಯ ಅರ್ಹತೆಯನ್ನು ಕೂಡ ಡಿನೋಟಿಫಿಕೇಷನ್‌ ಮೂಲಕ ಹಿಂಪಡೆಯಲಾಗುವುದು.

KSET ಪರೀಕ್ಷಾ ವಿಧಾನ

ಕೆಸೆಟ್ (KSET) ಪರೀಕ್ಷೆಯಲ್ಲಿ ಎರಡು ಪ್ರಶ್ನೆಪತ್ರಿಕೆಗಳಿರುತ್ತವೆ. ಎರಡು ಪತ್ರಿಕೆಗಳು ಸಹ ಬಹುಸಂಖ್ಯಾ ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ.

ಪತ್ರಿಕೆಅಂಕಗಳು ಪ್ರಶ್ನೆಗಳ ಸಂಖ್ಯೆ ಅವಧಿ
ಮೊದಲನೇ ಅವಧಿ I 10050 ಪ್ರಶ್ನೆಗಳು (ಕಡ್ಡಾಯ)1 ಗಂಟೆ (10.00 ರಿಂದ 11.00 ರವರೆಗೆ)
ಎರಡನೇ ಅವಧಿ II 200100 ಪ್ರಶ್ನೆಗಳು (ಕಡ್ಡಾಯ)2 ಗಂಟೆ (12.00 80 02.00)
ಪತ್ರಿಕೆ-I ಸಾಮಾನ್ಯ ಪತ್ರಿಕೆಯು ಬೋಧನೆ ಮತ್ತು ಬುದ್ಧಿ ಸಾಮರ್ಥ್ಯಕ್ಕನುಗುಣವಾಗಿರುತ್ತದೆ. ಈ ಪತ್ರಿಕೆಯು ಅಭ್ಯರ್ಥಿಗಳ ಸಾಮಾನ್ಯ ಪತ್ರಿಕೆಯಾಗಿದ್ದು, ಸಾಮಾನ್ಯ ಜ್ಞಾನ, ಬೋಧನೆ ಹಾಗೂ ಸಂಶೋಧನೆಯ ಅಭಿರುಚಿಗೆ ಸಂಬಂಧಿಸಿರುತ್ತದೆ. ಅಭ್ಯರ್ಥಿಗಳ ಸಾಮಾನ್ಯ ತಿಳಿವಳಿಕೆಗಳನ್ನು ಗ್ರಹಿಸುವ ಹಾಗೂ ಯೋಚನಾ ಸಾಮರ್ಥ್ಯವನ್ನು ಅಳೆಯುವಂತಹದ್ದಾಗಿರುತ್ತದೆ. ಈ ಪತ್ರಿಕೆಯು 50 ಬಹುಸಂಖ್ಯಾ ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿದ್ದು, ಪ್ರತಿ ಪ್ರಶ್ನೆಗೆ ಎರಡು ಅಂಕಗಳಿರುತ್ತದೆ. ಹಾಗೂ ಎಲ್ಲಾ ಪ್ರಶ್ನೆಗಳಿಗೂ ಕಡ್ಡಾಯವಾಗಿ ಉತ್ತರಿಸಬೇಕಾಗಿರುತ್ತದೆ.
ಪತ್ರಿಕೆ-II ಅಭ್ಯರ್ಥಿಯು ಆಯ್ಕೆ ಮಾಡಿದ ವಿಷಯದ ಸಾಮಾನ್ಯ ಜ್ಞಾನದಲ್ಲಿ ಈ ಪತ್ರಿಕೆಯು ಇರುತ್ತದೆ. ಈ ಪತ್ರಿಕೆಯು 100 ಕಡ್ಡಾಯ ಬಹುಸಂಖ್ಯಾ ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿದ್ದು, ಪ್ರತಿ ಪ್ರಶ್ನೆಗೂ 2 ಅಂಕಗಳಿರುತ್ತದೆ. ಗರಿಷ್ಠ 200 ಅಂಕಗಳಿರುತ್ತವೆ.

ಕೆಸೆಟ್‌ (KSET) ಪರೀಕ್ಷೆಯ ಫಲಿತಾಂಶ ಪ್ರಕಟಣೆಯ ವಿಧಾನ

(Qualifying criteria for UGC-NET to be implemented for KSET, is as per UGC Guidelines / Competent Authority / University are final and binding). ಅಭ್ಯರ್ಥಿಗಳು ಕೆಸೆಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಹಾಗೂ ಫಲಿತಾಂಶ ಪ್ರಕಟಣೆಯ ನಿಯಮ ಮತ್ತು ಹಂತಗಳನ್ನು ಈ ಕೆಳಗೆ ನೀಡಲಾಗಿದೆ. ಸಹಾಯಕ ಪ್ರಾಧ್ಯಾಪಕರ ಅರ್ಹತೆಗಾಗಿ ಅಭ್ಯರ್ಥಿಗಳು ಪೇಪರ್-I ಮತ್ತು ಪೇಪರ್-II ರ ಪತ್ರಿಕೆಗಳ ಒಟ್ಟು ಅಂಕಗಳಲ್ಲಿ ಕೆಳಗೆ ನಿರ್ದಿಷ್ಟಪಡಿಸಿದ ಕನಿಷ್ಟ ಅಂಕಗಳನ್ನು ಪಡೆಯಬೇಕು.

ವರ್ಗಪಡೆಯಬೇಕಾದ ಕನಿಷ್ಠ ಅಂಕಗಳು (%)
ಸಾಮಾನ್ಯ (GM)ಎರಡು ಪತ್ರಿಕೆಗಳಿಂದ ಒಟ್ಟು 40% ಅಂಕಗಳನ್ನು ಒಟ್ಟಿಗೆ ತೆಗೆದುಕೊಳ್ಳಬೇಕು
SC/ST/CAT-I/II-A/II-B/III-A/ III-B/PWD/ತೃತೀಯ ಲಿಂಗಿಎರಡು ಪತ್ರಿಕೆಗಳಿಂದ ಒಟ್ಟು 35% ಅಂಕಗಳನ್ನು ಒಟ್ಟಿಗೆ ತೆಗೆದುಕೊಳ್ಳಬೇಕು

ಹಂತ- I : ಸಹಾಯಕ ಪ್ರಾಧ್ಯಾಪಕರ ಅರ್ಹತೆಗಾಗಿ ಒಟ್ಟು ಹಾಜರಾದ ಅಭ್ಯರ್ಥಿಗಳಲ್ಲಿ (Total Slots) ಕೆಸೆಟ್‌ನ ಎರಡು ಪತ್ರಿಕೆಗಳಲ್ಲಿ ಹಾಜರಾದ 6% ಅಭ್ಯರ್ಥಿಗಳ ಸಂಖ್ಯೆಗೆ ಸಮಾನವಾಗಿರುತ್ತದೆ.

ಹಂತ- II : ಒದಗಿಸಲಾದ ಒಟ್ಟು ಸ್ಲಾಟ್‌ಗಳಲ್ಲಿ, ಎರಡೂ ಪತ್ರಿಕೆಗಳಲ್ಲಿ ಹಾಜರಾಗಿರಬೇಕು.

  • ಹಂತ 1 ನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಒಟ್ಟು ಅಂಕಗಳ ಅಧಾರದ ಮೇಲೆ ಅರ್ಹತಾ ಪಟ್ಟಿಯನ್ನು ವಿಷಯವಾರು ಮತ್ತು ಪ್ರವರ್ಗವಾರು ತಯಾರಿಸಲಾಗುತ್ತದೆ.
  • ಸಹಾಯಕ ಪ್ರಾಧ್ಯಾಪಕರ ಅರ್ಹತೆಯನ್ನು ಪರಿಗಣಿಸಬೇಕಾದರೆ, ಪತ್ರಿಕೆ – I ಮತ್ತು ಪತ್ರಿಕೆ – II ರಲ್ಲೂ ಹಾಜರಾಗಿ, GM ಅಭ್ಯರ್ಥಿಗಳು ಎರಡೂ ಪತ್ರಿಕೆಯಲ್ಲಿ ಶೇ.40 ಅಂಕಗಳು ಮತ್ತು ಮೀಸಲಾತಿ ವ್ಯಾಪ್ತಿಗೆ ಬರುವ ಪ.ಜಾ/ಪ.ಪಂ, ಇತರೆ ಹಿಂದುಗಳಿದ ವರ್ಗ, ತೃತೀಯ ಲಿಂಗದ ಅಭ್ಯರ್ಥಿಗಳು ಮತ್ತು ವಿಕಲಚೇತನ (SC/ST, OBC, TG and PWD) ಅಭ್ಯರ್ಥಿಗಳು ಎರಡೂ ಪತ್ರಿಕೆಯಲ್ಲಿ ಶೇ.35 ಅಂಕಗಳನ್ನು ಗಳಿಸಿರಬೇಕು. ಅಂತಹ ಅಭ್ಯರ್ಥಿಗಳನ್ನು ಮಾತ್ರ ಅರ್ಹತಾ ಪಟ್ಟಿಗೆ ಪರಿಗಣಿಸಲಾಗುವುದು.
  • ಅಭ್ಯರ್ಥಿಗಳು ಗಳಿಸಿರುವ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುವುದು.
  • ಯುಜಿಸಿಯ ಫಲಿತಾಂಶದ ಸೂತ್ರದ ಪ್ರಕಾರ ಸ್ಲಾಟ್‌ಗಳನ್ನು ತಯಾರಿಸಿ, ರಾಜ್ಯ ಸರ್ಕಾರದ ಮೀಸಲಾತಿ ನೀತಿಯ ಅನುಸಾರವಾಗಿ ಲೆಕ್ಕಚಾರ ಮಾಡಿ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಫಲಿತಾಂಶವನ್ನು ಪ್ರಕಟಿಸಲಾಗುವುದು.
  • ಈ ಮೇಲೆ ತಿಳಿಸಿದ ಫಲಿತಾಂಶದ ಪ್ರಕಟಣೆಯ ವಿಧಾನವು ಕೆಸೆಟ್ ನಿಬಂಧನೆಗಳಿಗೆ ಬದ್ದವಾಗಿರುತ್ತದೆ.

ಹಂತ- III : ಯುಜಿಸಿಯ ನಿರ್ದೇಶನದ ಪ್ರಕಾರ, ಹಾಜರಾಗುವ ಅಭ್ಯರ್ಥಿಗಳಲ್ಲಿ ಶೇಕಡ 6ರಷ್ಟು ಅಭ್ಯರ್ಥಿಗಳಿಗೆ ಮಾತ್ರ ಸಹಾಯಕ ಪ್ರಾಧ್ಯಾಪಕರಿಗೆ ಅರ್ಹರು ಎಂದು ಪರಿಗಣಿಸಲಾಗುವುದು. ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಮೀಸಲಾತಿ ನೀತಿಯನ್ನು ಅನುಸರಿಸಿ ವರ್ಗವಾರು ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪಟ್ಟಿಯನ್ನು ತಯಾರಿಸಲಾಗುತ್ತದೆ.

IMG 20230917 WA0050

ಕೆಸೆಟ್ ಪಠ್ಯಕ್ರಮ ಮತ್ತು ಪ್ರಶ್ನೆ ಪತ್ರಿಕೆ

ಪರೀಕ್ಷಾ ಪಠ್ಯಕ್ರಮ: ಕೆಸೆಟ್ (KSET) ಪರೀಕ್ಷಾ ಪಠ್ಯಕ್ರಮವು, UGC/CSIR ನೆಟ್ ನಿಗಡಿಪಡಿಸಿರುವ ಪಠ್ಯಕ್ರಮದ ಮಾದರಿಯಲ್ಲೇ ಇರುತ್ತದೆ. ಎಲ್ಲಾ ವಿಷಯಗಳ ಪಠ್ಯಕ್ರಮವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ https://cetonline.karnataka.gov.in/kea/kset2023 ನಿಂದ Download ಮಾಡಿಕೊಳ್ಳಬಹುದು.

ಮೂಲ ವಿ‌ಷಯಗಳನ್ನು ಹೊರತುಪಡಿಸಿ ಬೇರೆ ವಿಷಯಗಳಲ್ಲಿ ಅರ್ಜಿ ಸಲ್ಲಿಸಬಹುದಾದ ವಿಷಯಗಳು

1) ಅರ್ಥಶಾಸ್ತ್ರ / ಕೋ-ಆಪರೇಷನ್ ವಿಷಯದಲ್ಲಿ ಮತ್ತು ಇವುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಎರಡು ವರ್ಷ ಅವಧಿಯ ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳು ‘ಅರ್ಥಶಾಸ್ತ್ರ’ ದಲ್ಲಿ ಕೆಸೆಟ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ.

2) ನಿರ್ವಹಣೆ (ಮ್ಯಾನೇಜ್‌ಮೆಂಟ್) ವಿಷಯದಲ್ಲಿ ಮತ್ತು ಇವುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಎರಡು ವರ್ಷ ಅವಧಿಯ ಸ್ನಾತಕೋತ್ತರ ಪದವಿ ಅಥವಾ ಪಿ.ಜಿ. ಡಿಪ್ಲೊಮೊ ಇನ್ ಮ್ಯಾನೆಜ್‌ಮೆಂಟ್‌ ಹೊಂದಿರುವ ಅಭ್ಯರ್ಥಿಗಳು ನಿರ್ವಹಣೆ’ (ಮ್ಯಾನೇಜ್‌ಮೆಂಟ್) ನಲ್ಲಿ ಕೆಸೆಟ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ.

3) ಜಾನಪದ ಸಾಹಿತ್ಯ, ಕನ್ನಡ, ಜಾನಪದ, ಕನ್ನಡ ಜಾನಪದ, ಜಾನಪದ ಸಾಹಿತ್ಯ ಮತ್ತು ಇವುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರುವ ಅಥವಾ ಅಂತಿಮ ವರ್ಷದ ಪರೀಕ್ಷೆಗೆ ಕುಳಿತಿರುವ ಅಭ್ಯರ್ಥಿಗಳು ‘ಜಾನಪದ ಸಾಹಿತ್ಯ’ ದಲ್ಲಿ ಕೆಸೆಟ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ.

4) ಭೌತಶಾಸ್ತ್ರ ಎಲೆಕ್ಟ್ರಾನಿಕ್ಸ್ /ಪರಮಾಣು ಮತ್ತು ಅಣು ಭೌತವಿಜ್ಞಾನ (ಕ್ಲಾಸಿಕಲ್ ಡೈನಾಮಿಕ್ಸ್ ಕಂಡೆನ್ಸಡ್ ಮ್ಯಾಟರ್ ಫಿಜಿಕ್ಸ್/ ಎಲೆಕ್ಟೋಮ್ಯಾಗ್ನೆಟಿಕ್/ ಎಕ್ಸ್ಪಿರಿಮೆಂಟಲ್ ಡಿಸೈನ್/ ನ್ಯೂಕ್ಲಿಯರ್, ಸ್ಟೈಸ್ ಪ್ರಾಕ್ಟಿಕಲ್ ಫಿಜಿಕ್ಸ್/ ಕ್ವಾಂಟಮ್ ಫಿಜಿಕ್ಸ್/ಥೆರ್ಮೊಡೈನಾಮಿಕ್ಸ್, ಅಕ್ಟೋನಾಮಿ, ಅಸೋಫಿಜಿಕ್ಸ್ / ಮೆಟಿರೀಯಲ್ ಸೈನ್ಸ್ ಮತ್ತು ಇತರೆ ಸಂಬಂಧಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರುವ ಅಥವಾ ಅಂತಿಮ ವರ್ಷದ ಪರೀಕ್ಷೆಗೆ ಕುಳಿತಿರುವ ಅಭ್ಯರ್ಥಿಗಳು ಕೆಸೆಟ್ ಪರೀಕ್ಷೆಯನ್ನು ‘ಭೌತಿಕ ವಿಜ್ಞಾನ’ದಲ್ಲಿ ಪರೀಕ್ಷೆ ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ.

5) ಯಾವ ಅಭ್ಯರ್ಥಿಗಳು ಶುದ್ಧ ಗಣಿತ ವಿಜ್ಞಾನ/ ಸಂಖ್ಯಾಶಾಸ್ತ್ರ ಆನ್ವಯಿಕ ಗಣಿತ ವಿಜ್ಞಾನ ಗಣಿತ ಮತ್ತು ಗಣಕ ವಿಜ್ಞಾನ ಮತ್ತು ಇತರೆ ಸಂಬಂಧಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರುವ ಅಥವಾ ಅಂತಿಮ ವರ್ಷದ ಪರೀಕ್ಷೆಗೆ ಕುಳಿತಿರುವ ಅಭ್ಯರ್ಥಿಗಳು ಕೆಸೆಟ್ ಪರೀಕ್ಷೆಯನ್ನು ‘ಗಣಿತ ವಿಜ್ಞಾನ’ದಲ್ಲಿ ಪರೀಕ್ಷೆ ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ.

6) ರಾಸಾಯನಿಕ ವಿಜ್ಞಾನಗಳು, ವಿಶ್ಲೇಷಣಾತ್ಮಕ ರಾಸಾಯನ ವಿಜ್ಞಾನ/ ಇನಾರ್ಗ್ಯಾನಿಕ್ (ನಿರವಯವ) / ರಸಾಯನಿಕ ವಿಜ್ಞಾನ / ಆರ್ಗ್ಯಾನಿಕ್ (ಸವಯವ) ರಸಾಯನ ವಿಜ್ಞಾನ/ ಭೌತ ರಸಾಯನ ವಿಜ್ಞಾನ/ ಮೆಡಿಸಿನಲ್ ಕೆಮಿಸ್ಟ್ರಿ/ ಅನ್ವಯಿಕ ರಾಸಾಯನ ಶಾಸ್ತ್ರ / ನ್ಯೂಕ್ಲಿಯರ್ ಕೆಮಿಸ್ಟ್ರಿ / ಪರಿಸರ ರಸಾಯನ ಶಾಸ್ತ್ರ / ಮೆರೈನ್ ಕೆಮಿಸ್ಟ್ರಿ / ಪಾರ್ಮಾಸಿಟಿಕಲ್ ಕೆಮಿಸ್ಟ್ರಿ / ಬಯೋ-ಆರ್ಗಾನಿಕ್ ಕೆಮಿಸ್ಟ್ರಿ ಮತ್ತು ಇತರೆ ಸಂಬಂಧಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರುವ ಅಥವಾ ಅಂತಿಮ ವರ್ಷದ ಪರೀಕ್ಷೆಗೆ ಕುಳಿತಿರುವ ಅಭ್ಯರ್ಥಿಗಳು ಕೆಸೆಟ್ ಪರೀಕ್ಷೆಯನ್ನು ‘ರಸಾಯನಿಕ ವಿಜ್ಞಾನ’ದಲ್ಲಿ ಪರೀಕ್ಷೆ ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ.

7) ಜೀವ ರಾಸಾಯನ ವಿಜ್ಞಾನ/ ಜೀವ ವಿಜ್ಞಾನ/ ಜೈವಿಕ ತಂತ್ರಜ್ಞಾನ/ಜೀವವೈವಿಧ್ಯತೆ ಮತ್ತು Taxonoy/ ಸಸ್ಯವಿಜ್ಞಾನ/ Genetic/ ಮೈಕ್ರೋಬಯಾಲಜಿ/ Physiology/ ಪ್ರಾಣಿ ವಿಜ್ಞಾನ/ ಫಿಶರಿಸೈನ್ಸ್/ ಅನಿಮಲ್ ಬಯೋಲಾಜಿ/ ಮೆರೈನ್ ಬಯೋಲಜಿ/ ಅಫ್ರೆಡ್ ಜೆನೆಟಿಕ್ಸ್ / ಸೆರಿಕಲ್ಟರ್ ಮತ್ತು ಸಂಬಂಧಿಸಿದ ಇತರೆ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರುವ ಅಥವಾ ಅಂತಿಮ ವರ್ಷದ ಪರೀಕ್ಷೆಗೆ ಕುಳಿತಿರುವ ಅಭ್ಯರ್ಥಿಗಳು ಕೆಸೆಟ್ ಪರೀಕ್ಷೆಯನ್ನು ‘ಜೈವಿಕ ವಿಜ್ಞಾನ’ದಲ್ಲಿ ಪರೀಕ್ಷೆ ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ.

8) ಭೂ ವಿಜ್ಞಾನ/ಅನ್ವಯಿಕ ಭೂ ವಿಜ್ಞಾನ/ ಭೂ ಭೌತವಿಜ್ಞಾನ (ಜಿಯೋ ಫಿಸಿಕ್ಸ್) / ಹವಾಮಾನ ವಿಜ್ಞಾನ/ ಸಾಗರ ವಿಜ್ಞಾನ / ಫಿಜಿಕಲ್ ಜಿಯೋಗ್ರಾಫಿ / ಎಂ.ಎಸ್. ಜಿಯೋಲಾಜಿ | ಭೂ ವಿಜ್ಞಾನ ಸಂಪನ್ಮೂಲ ಮತ್ತು ಸಾಗರ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ | ಪೆಟ್ರೋಲಿಯಂ ಜಿಯೋಲಾಜಿ / ಜಿಯೋಇನ್‌ಫಾರ್‌ಮ್ಯಾಟಿಕ್ಸ್/ ಅಪ್ರೈಡ್ ಜಿಯೋಕೆಮಿಸ್ಟ್ರಿ / ಮತ್ತು ಸಂಬಂಧಿಸಿದ ಇತರೆ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರುವ ಅಥವಾ ಅಂತಿಮ ವರ್ಷದ ಪರೀಕ್ಷೆಗೆ ಕುಳಿತಿರುವ ಅಭ್ಯರ್ಥಿಗಳು ಕೆಸೆಟ್ ಪರೀಕ್ಷೆಯನ್ನು ‘ಭೂ ವಿಜ್ಞಾನ’ದಲ್ಲಿ ಪರೀಕ್ಷೆ ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ.

9) ಪುರಾತತ್ವ ಶಾಸ್ತ್ರ (ಆರ್ಕಿಯಾಲಜಿ) ವಿಷಯದಲ್ಲಿ ಮತ್ತು ಇವುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಎರಡು ವರ್ಷ ಅವಧಿಯ ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳು ‘ಪುರಾತತ್ವ ಶಾಸ್ತ್ರ’ (ಆರ್ಕಿಯಾಲಜಿ)ದಲ್ಲಿ ಕೆಸೆಟ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ.

10) ಮಹಿಳಾ ಅಧ್ಯಯನ/ ಗ್ರಾಮೀಣ ಅಭಿವೃದ್ಧಿ, ಮಾನವಿಕ / ಸಮಾಜ ವಿಜ್ಞಾನ ಹಾಗೂ ಭಾಷಾ ವಿಷಯಗಳಲ್ಲಿ ಎರಡು ವರ್ಷ ಅವಧಿಯ ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳು ‘ಮಹಿಳಾ ಅಧ್ಯಯನ’ದಲ್ಲಿ ಕೆಸೆಟ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ.

ಪರೀಕ್ಷಾ ಕೇಂದ್ರಗಳು

ಭಾಗ-ಎ ಯಲ್ಲಿ ನೀಡಲಾದ ಆಯ್ದ 18 ವಿಷಯಗಳಿಗೆ ಕೆಸೆಟ್‌ (KSET) ಪರೀಕ್ಷೆಯನ್ನು ಕರ್ನಾಟಕ ರಾಜ್ಯದ ಈ ಕೆಳಕಂಡ ಎಲ್ಲಾ 08 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತಿದ್ದು, ಅಭ್ಯರ್ಥಿಗಳು ಯಾವುದಾದರೂ ಒಂದು ಪರೀಕ್ಷಾ ಕೇಂದ್ರವನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು.

IMG 20230917 WA0048

ಭಾಗ-ಬಿ ಯಲ್ಲಿ ನೀಡಲಾಗಿರುವ 23 ವಿಷಯಗಳಿಗೆ ಅಭ್ಯರ್ಥಿಗಳು ಕೇವಲ ಬೆಂಗಳೂರು ಪರೀಕ್ಷಾ ಕೇಂದ್ರವನ್ನು ಮಾತ್ರ ಆಯ್ಕೆ ಮಾಡಿಕೊಳ್ಳತಕ್ಕದ್ದು.

IMG 20230917 WA0049

ಟಿಪ್ಪಣಿ : ವಿದ್ಯಾರ್ಥಿಯು ಒಮ್ಮೆ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿದ ನಂತರ, ಪರೀಕ್ಷಾ ಕೇಂದ್ರದ ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ.

ಕೆಸೆಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಅರ್ಜಿ ಮತ್ತು ಇತರ ದಾಖಲೆಗಳನ್ನು ಗೆಝಟೆಡ್ ಅಧಿಕಾರಿಯಿಂದ ದೃಢೀಕರಿಸಿ ಸಲ್ಲಿಸಬೇಕಾದ ಅಡಕಗಳು ಈ ಕೆಳಗಿನಂತಿವೆ.

ಅಭ್ಯರ್ಥಿಯು ತಮ್ಮ ಅನ್‌ಲೈನ್‌ ಅರ್ಜಿಯ ಮುದ್ರಿತ ಅರ್ಜಿಯೊಂದಿಗೆ ಈ ಕೆಳಗಿನ ದಾಖಲೆಗಳನ್ನು ಪ್ರತ್ಯೇಕ A-4 ಅಳತೆಯ ಕಾಗದದಲ್ಲಿ ಮುದ್ರಿಸಿ ಸಲ್ಲಿಸಬೇಕು.

a) ಅರ್ಜಿ (ಒಂದು ಪ್ರತಿ)

b) ಅಂಚೆ ಕಛೇರಿ ಚಲನ್ ಪ್ರತಿ (Xerox Copy)

c) ಅಭ್ಯರ್ಥಿಯ ಹೆಸರು ಮತ್ತು ಪೊಷಕರ ಹೆಸರನ್ನು ಪರಿಶೀಲಿಸಲು 10ನೇ / ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಅತ್ಯಗತ್ಯ.

d) ಅಭ್ಯರ್ಥಿಗಳು SC/ ST, ಪ್ರವರ್ಗ II-A, II-B, III-A, III-B ಜಾತಿ ಮತ್ತು ಆದಾಯ ಪ್ರಮಾಣ ಪತ್ರ, e) ವಿಶೇಷ ಚೇತನ ಅಭ್ಯರ್ಥಿಗಳು (PWD) ಜಿಲ್ಲಾ ಸಿವಿಲ್ ಸರ್ಜನ್ ರವರಿಂದ ವೈದ್ಯಕೀಯ ಪ್ರಮಾಣ ಪತ್ರವನ್ನು ಧೃಡೀಕರಿಸಿ ಲಗತ್ತಿಸಬೇಕು. [Medical Certificate with 40% or more disability].

f) ತೃತೀಯ ಲಿಂಗ ಅಭ್ಯರ್ಥಿಗಳು ಸಂಬಂಧಪಟ್ಟ ಜಿಲ್ಲಾ ಮ್ಯಾಜಿಸ್ಟ್ರೇಟ್ ರವರಿಂದ ಪಡೆದ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.

g) ಅಂತಿಮ ವರ್ಷದ ಸ್ನಾತಕೋತ್ತರ ಪದವಿಯ ಧೃಡೀಕೃತ ಅಂಕಪಟ್ಟಿಯ ಪ್ರತಿ

h) ಪರೀಕ್ಷಾ ಪ್ರಮಾಣಪತ್ರ (Result Sheet) ಮತ್ತು ಸ್ನಾತಕೋತ್ತರ ಪದವಿ ಅಂಕಪಟ್ಟಿಯನ್ನು ಸಲ್ಲಿಸಬೇಕು.

Leave a comment